ಪ್ರತಿಜೀವಕ ನಿರೋಧಕತೆಯ ಬಗ್ಗೆ ತಿಳಿದಿರಬೇಕಾದ, 7 ಪ್ರಮುಖ ಸಂಗತಿಗಳು..!!
ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಎನ್ನುವುದು, ಬ್ಯಾಕ್ಟೀರಿಯಾವು ಪ್ರತಿಜೀವಕಗಳ ಪರಿಣಾಮಗಳನ್ನು ತಡೆದುಕೊಳ್ಳಲು ವಿಕಸನ ಗೊಂಡಾಗ ಜಾಗತಿಕ ಆತಂಕವಾಗಿ ಸಂಭವಿಸುತ್ತವೆ. ಆಗ ಈ ರೋಗನಿರೋಧಕ ಔಷಧಿಗಳನ್ನು ಕಡಿಮೆ ಪರಿಣಾಮಕಾರಿ ಯನ್ನಾಗಿಸುತ್ತದೆ.
ರೋಗನಿರೋಧಕಗಳ ಪರಿಣಾಮವನ್ನು ತಡೆದು ಕೊಂಡರೂ ಸಹ ಬ್ಯಾಕ್ಟೀರಿಯಾಗಳು ವಿಕಸನಗೊಳ್ಳು ತ್ತಿವೆ.ಇದು ಜಾಗತಿಕ ಆತಂಕವನ್ನುಂಟು ಮಾಡಿ ರೋಗ ನಿರೋಧಕಗಳ ಪರಿಣಾಮವನ್ನು ಕಡಿಮೆ ಮಾಡುತ್ತಿವೆ. ಈ ಪ್ರತಿಜೀವಕ ನಿರೋಧಕತೆಯು ಜಾಗತಿಕ ಆರೋಗ್ಯಕ್ಕೆ ಗಮನಾರ್ಹ ಆತಂಕವಾಗಿದ್ದು, ಅದರೊಂದಿಗೆ ಸಂಬಂಧಿ ಸಿದ ಆತಂಕಕಾರಿ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳು ವುದು ಮುಖ್ಯವಾಗಿದೆ. ಪ್ರತಿಜೀವಕ ನಿರೋಧಕತೆಯ ಅರ್ಥ ಮತ್ತು ಪ್ರತಿಯೊಬ್ಬರೂ ತಿಳಿದಿರಬೇಕಾದ ಆತಂಕ ಕಾರಿ ಪ್ರವೃತ್ತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
♦ ಆ್ಯಂಟಿ ಬಯೋಟಿಕ್ ರೆಸಿಸ್ಟೆನ್ಸ್ (ಪ್ರತಿಜೀವಕ ನಿರೋಧಕತೆ) ಎಂದರೇನು ?
ಗುರುಗ್ರಾಮ್‌ನ ಆರ್ಟೆಮಿಸ್ ಆಸ್ಪತ್ರೆಯ ಲ್ಯಾಬ್ ಸೇವೆಗಳು ಮತ್ತು ಸೋಂಕು ನಿಯಂತ್ರಣದ ಅಧ್ಯಕ್ಷೆ ಡಾ.ನಮಿತಾ ಜಗ್ಗಿ ಹೇಳುವ ಪ್ರಕಾರ, " ಆ್ಯಂಟಿ ಬಯೋಟಿಕ್ ರೆಸಿಸ್ಟೆನ್ಸ್ ಎನ್ನುವುದು, ಬ್ಯಾಕ್ಟೀರಿಯಾವು ಪ್ರತಿಜೀವಕಗಳ ಪರಿಣಾಮಗಳನ್ನು ತಡೆದುಕೊಳ್ಳಲು ವಿಕಸನಗೊಂಡಾಗ ಜಾಗತಿಕ ಆತಂಕವಾಗಿ ಸಂಭವಿಸು ತ್ತವೆ. ಆಗ ಈ ರೋಗನಿರೋಧಕ ಔಷಧಿಗಳನ್ನು ಕಡಿಮೆ ಪರಿಣಾಮಕಾರಿಯನ್ನಾಗಿಸುತ್ತದೆ.
ಪ್ರತಿಜೀವಕಗಳ ಅತಿಯಾದ ಬಳಕೆ ಮತ್ತು ದುರು ಪಯೋಗವು ಪ್ರತಿಜೀವಕ ನಿರೋಧಕತೆಗೆ ಕೊಡುಗೆ ನೀಡುತ್ತದೆ, ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗು ತ್ತದೆ ಮತ್ತು ವೈದ್ಯಕೀಯ ಮಧ್ಯಸ್ಥಿಕೆಗಳಿಗೆ ಕಠಿಣ ಸವಾಲುಗಳನ್ನು ಒಡ್ಡುತ್ತದೆ. ಈ ಬೆಳೆಯುತ್ತಿರುವ ಸಮಸ್ಯೆಯನ್ನು ಎದುರಿಸಲು ಪ್ರತಿಜೀವಕಗಳ ಜವಾಬ್ದಾರಿಯುತ ಬಳಕೆ ಅತ್ಯಗತ್ಯ. ಪ್ರತಿಜೀವಕ ನಿರೋಧಕತೆಯ ಗಂಭೀರತೆಯನ್ನು ಎತ್ತಿ ತೋರಿಸುವ ಏಳು ಪ್ರವೃತ್ತಿಗಳ ಕುರಿತು.
♦ ಹೆಚ್ಚುತ್ತಿರುವ ಪ್ರತಿರೋಧಕ ದರಗಳು :
ಬ್ಯಾಕ್ಟೀರಿಯಾಗಳು ಆ್ಯಂಟಿಬಯೋಟಿಕ್‌ಗಳ ಪರಿಣಾಮ ಗಳನ್ನು ತಡೆದುಕೊಂಡು ವಿಕಸನಗೊಳ್ಳುತ್ತಿವೆ.ಈ ಬೆಳೆ ಯುತ್ತಿರುವ ಪ್ರವೃತ್ತಿಯು ನಿರ್ಣಾಯಕ ಔಷಧಿಗಳ ಪ್ರಭಾವವನ್ನು ಕಡಿಮೆ ಮಾಡುತ್ತವೆ.
♦ ಮಿತಿಮೀರಿದ ಬಳಕೆ ಮತ್ತು ದುರುಪಯೋಗ :
ಈ ಔಷಧಿಗಳ ಅತಿಯಾದ ಬಳಕೆ ಮತ್ತು ದುರು ಪಯೋಗವು ಪ್ರತಿಜೀವಕ ನಿರೋಧಕತೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಸ್ವ-ಔಷಧಿ ಸೇವನೆ ಹಾಗೂ ಅಪೂರ್ಣ ಚಿಕಿತ್ಸೆ ನಿರೋಧಕತೆ ತಳಿಗಳ ಬೆಳವಣಿಗೆಗೆ ಕಾರಣವಾಗಿದೆ.
♦ ಕೃಷಿ ಪದ್ಧತಿಗಳು :
ಪಶುಗಳ ಬೆಳವಣಿಗೆ ಹೆಚ್ಚಿಸಲು ಹಾಗೂ ಸೋಂಕು ತಡೆಗಟ್ಟಲು ಪ್ರತಿಜೀವಕಗಳನ್ನು ಕೃಷಿಯಲ್ಲಿ ವ್ಯಾಪಕ ವಾಗಿ ಬಳಸಲಾಗುತ್ತಿರುವುದರಿಂದ ಪ್ರತಿಜೀವಕ ನಿರೋಧಕತೆ ಹೊರಹೊಮ್ಮಲು ಕಾರಣವಾಗಿ ಆಹಾರ ಸೇವನೆ ಮೂಲಕ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ.
♦ ನಿರೋಧಕ ತಳಿಗಳ ಜಾಗತಿಕ ಹರಡುವಿಕೆ :
ನಿರೋಧಕತೆಯು ಯಾವುದಕ್ಕೂ ಸೀಮಿತವಾಗಿಲ್ಲ. ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರದ ಮೂಲಕ ಜಾಗತಿಕ ಸಂಪರ್ಕದ ಹೆಚ್ಚಳದೊಂದಿಗೆ ಈ ತಳಿಗಳು ದೇಶ ಮತ್ತು ಖಂಡಗಳಲ್ಲಿ ಬಹಳ ಸುಲಭವಾಗಿ ಹರಡುತ್ತವೆ.ಈ ಜಾಗತಿಕ ಅಂತರ್ ಸಂಪರ್ಕ ಪ್ರತಿಜೀವಕ ನಿರೋಧಕತೆಯ ನಿರ್ವಹಣೆಗೆ ಕಷ್ಟವಾಗಿದೆ.
♦ ಪ್ರತಿಜೀವಕಗಳ ಸೀಮಿತ ಪತ್ತೆ :
ಔಷಧಿಯ ಕಂಪೆನಿಗಳಿಗೆ ಹೊಸ ಪ್ರತಿಜೀವಕಗಳನ್ನು ಮಾರುಕಟ್ಟೆಗೆ ತರುವಲ್ಲಿ ಸವಾಲುಗಳು ಎದುರಾಗುತ್ತಿವೆ. ಇದಕ್ಕೆ ಹಣಕಾಸಿನ ನಿರ್ಬಂಧ ಹಾಗೂ ಕಾಲಾನಂತರ ದಲ್ಲಿಯೂ ಪರಿಣಾಮಕಾರಿಯಾಗಿ ಉಳಿಯಬಲ್ಲ ಪ್ರತಿಜೀವಕಗಳನ್ನು ಹೊಸದಾಗಿ ಕಂಡು ಹಿಡಿಯಲು ಸಾಧ್ಯವಾಗದೇ ಇರುವುದು.
♦ ವೈದ್ಯಕೀಯ ವಿಧಾನಗಳ ಮೇಲೆ ಪರಿಣಾಮ :
ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಅಂಗಾಂಗ ಕಸಿ ಗಳಂತಹ ದೈನಂದಿನ ವೈದ್ಯಕೀಯ ವಿಧಾನಗಳ ಮೇಲೆ ಪ್ರತಿಜೀವಕ ರೋಗನಿರೋಧಕಗಳು ದುಷ್ಪರಿಣಾಮ ಬೀರುತ್ತಿವೆ. ಒಮ್ಮೆ ಸುಲಭವಾಗಿ ಸೋಂಕುಗಳಿಗೆ ನೀಡಬಹುದಾದ ಚಿಕಿತ್ಸೆಗಳು ಜೀವಕ್ಕೆ ಅಪಾಯಕಾರಿ ಯಾಗಬಲ್ಲವು ಮತ್ತು ಇವು ವೈದ್ಯಕೀಯ ವಿಧಾನಗಳಿಗೆ ಸಂಕೀರ್ಣತೆ ತಂದೊಡ್ಡಬಹುದು.
♦ ಎರಡನೇ ಹಂತದ ಪರಿಣಾಮ :
ಪ್ರತಿಜೀವಕ ನಿರೋಧಕತೆಯು ಬರೀ ನಿರ್ದಿಷ್ಟ ಬ್ಯಾಕ್ಟೀರಿ ಯಾಗಳ ಮೇಲೆಯೇ ಪರಿಣಾಮ ಬೀರುವುದಿಲ್ಲ. ಬದಲಿಗೆ ನಮ್ಮ ದೇಹಕ್ಕೆ ಅಗತ್ಯವಾಗಿರುವ ಪ್ರಯೋಜನ ಕಾರಿ ಸೂಕ್ಷ್ಮಜೀವಿಗಳ ಮೇಲೆಯೂ ಹಾನಿ ಒದಗಿಸಲ್ಲ ದು. ಇಂತಹ ಸೂಕ್ಷ್ಮ ಸಮತೋಲನದಂತಹ ತೊಂದರೆ ಯ ನಡುವೆ ಮನುಷ್ಯನ ಆರೋಗ್ಯದ ಮೇಲೆ ದೀರ್ಘಾ ವಧಿಯ ಇತರೆ ಹಾನಿಕಾರಕ ಪರಿಣಾಮ ಬೀರಬಲ್ಲದು.
ಸಂಕ್ಷಿಪ್ತವಾಗಿ ಹೇಳುವುದಾದರೆ,ಪ್ರತಿಜೀವಕ ನಿರೋಧ ಕತೆಯನ್ನು ಪರಿಹರಿಸಲು ಆರೋಗ್ಯ ತಜ್ಞರು, ನೀತಿ ಆಯೋಜಕರು ಮತ್ತು ಸಾರ್ವಜನಿಕರು ಈ ಮೂವರ ಸಹಕಾರ ಅಗತ್ಯವಿದೆ. ಜವಾಬ್ದಾರಿಯುತ ಪ್ರತಿಜೀವಕ ಬಳಕೆಯನ್ನು ಉತ್ತೇಜಿಸುವುದು,ಹೊಡ ಪ್ರತಿಜೀವಕಗಳ ಸಂಶೋಧನೆಗೆ ಬೆಂಬಲ ನೀಡುವುದು ಮತ್ತು ಪ್ರತಿ ರೋಧವನ್ನು ಎದುರಿಸಲು ಪರಿಣಾಮಕಾರಿ ಪರಿಹಾರ ವನ್ನು ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ.ಈ ಆತಂಕಕಾರಿ ಪ್ರವೃತ್ತಿಗಳ ಬಗ್ಗೆ ತಿಳಿ ಯುವ ಮೂಲಕ ನಾವು ಪ್ರತಿಜೀವಕಗಳನ್ನು ಪರಿಣಾಮ ಕಾರಿಯಾಗಿ ಸಂರಕ್ಷಿಸಬೇಕು ಹಾಗೂ ಆರೋಗ್ಯಯುತ ಭವಿಷ್ಯವನ್ನು ನಿರ್ಮಿಸಲು ಕೊಡುಗೆ ನೀಡಬೇಕು.